ನ ಗೃಹಂ ಗೃಹಮಿತ್ಯಾಹು: ಗೃಹಿಣೀ ಗೃಹ ಮುಚ್ಚ್ಯತೇ|
ಗೃಹಂ ತು ಗೃಹಿಣೀಹೀನಂ ಕಾಂತಾರಾದತಿರಿಚ್ಯತೇ||
ನಮ್ಮ ಹಬ್ಬ ನಮ್ಮ ಸಂಸ್ಕೃತಿಯನ್ನು ಬಿಂಬುಸುತ್ತವೆ. ಇತ್ತೀಚಿನ ಜಾಗತೀಕರಣದ ಹೆಸರಿನಲ್ಲಿ ನಾವು ನಮ್ಮ ಹಬ್ಬಗಳ ಆಚರಣೆಯನ್ನೇ ಮರೆತಿದ್ದೇವೆ ಅಂತ ಹೇಳುವುದಕ್ಕೆ ನನಗೆ ತುಂಬಾ ಬೇಸರವಾಗುತ್ತದೆ. ನಮ್ಮ ಆಚರಣೆಗಳನ್ನು ನಾವು ಬಿಡುತ್ತಾ ಹೋದರೆ ನಮಗೂ ಮತ್ತು ಪಾಶ್ಚ್ಯಾತ್ಯ ದೇಶದವರಿಗೂ ವ್ಯತ್ಯಾಸವೇ ಇರುವುದಿಲ್ಲ. ವಿದೇಶಿಯರು ನಮ್ಮನ್ನು ಮತ್ತು ನಮ್ಮ ದೇಶವನ್ನು ಹೆಚ್ಚಾಗಿ ಪ್ರೀತಿಸಲು ಮತ್ತು ಗೌರವಿಸಲು ನಮ್ಮ ದೇಶದ ಈ ವೈವಿಧ್ಯತೆಗಳಿಂದ ಕೂಡಿರುವ ನಮ್ಮ ಸಂಸ್ಕೃತಿ ಮತ್ತು ಅದನ್ನು ಬಿಂಬಿಸುವ ಹಬ್ಬಗಳಿಗೋಸ್ಕರ ಮಾತ್ರ ಅನ್ನುವುದು ನೆನಪಿರಲಿ.
ಹಬ್ಬದ ಆಚರಣೆಗಳು ಮೂಢನಂಬಿಕೆಗಳಲ್ಲ ಈ ಹಬ್ಬಗಳು ನಮ್ಮಲ್ಲಿ ಹೊಸ ಶಕ್ತಿ, ಚೈತನ್ಯ, ಸಂಘಟನೆಯ ಮನೋಭಾವ ಮತ್ತು ಹುರುಪು ತುಂಬುವುದರಲ್ಲಿ ಸಂದೇಹವಿಲ್ಲ. ಹಬ್ಬದ ಹಿಂದುರುವ ಕಾರಣ ಮತ್ತು ವಿಧಾನವನ್ನು ತಿಳಿದು ಆಚರಿಸೋಣ. ಇದರಿಂದ ಹಬ್ಬಕ್ಕೆ ಇನ್ನುಷ್ಟು ಮೆರುಗು ತಂದು ಕೊಡುತ್ತದೆ.